Wednesday 28 December 2011

ಮಚ್ಚಂಪಾಡಿ ಇಸ್ಲಾಮಿಕ್ ಸೆಂಟರ್ ಉದ್ಗಾಟನೆ ಫೆಬ್ರವರಿ 2 ಕ್ಕೆ


ಮಚ್ಚಂಪಾಡಿ : ಮಚ್ಚಂಪಾಡಿ ಜನತೆಯ ಆಶಾ ಕೇಂದ್ರವಾದ ಮಚ್ಚಂಪಾಡಿ ಶಂಸುಲ್ ಉಲಮಾ ನಗರದಲ್ಲಿ ನೂತನವಾಗಿ ನಿರ್ಮಿಸಿದ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಉದ್ಗಾಟನೆಯು ಫೆಬ್ರವರಿ ೨ ರಂದು ನಡೆಯಲಿದೆ. ನೂತನ ಕಟ್ಟಡವನ್ನು ಪಾಣಕ್ಕಾಡ್ ಸಯ್ಯದ್ ಅಬ್ಬಾಸಲೀ ಶಿಹಾಬ್ ತಂಘಳ್ ಉದ್ಗಾಟಿಸುವರು. ಸಮಾರಂಭದಲ್ಲಿ ಸಮಸ್ತದ ವಿವಿಧ ನಾಯಕರುಗಳು , ವಾಗ್ಮಿಗಳು , ವಿವಿಧ ಧಾರ್ಮಿಕ ,ಸಾಮಾಜಿಕ , ರಾಜಕೀಯ ನೇತಾರರು ಭಾಗವಹಿಸಲಿರುವರೆಂದು ಪ್ರಕಟನೆ ತಿಳಿಸಿದೆ.

ರಿಯಾದ್ ನಲ್ಲಿ ಪ್ರಾಮಾಣಿಕತೆಯನ್ನು ತೋರಿಸಿದ ಪಾವೂರು ಹರೇಕಳದ ಹೈದರ್


ಡಿಸಂಬರ್ 28-2011 ಗಡಿನಾಡ ನ್ಯೂಜ್
ರಿಯಾದ್;(ಸೌದಿ ಅರೇಬಿಯಾ) ಮಾರ್ಗದಲ್ಲಿ ಬಿದ್ದಿದ್ದ 4000 ರಿಯಾಲ್, ಗುರುತು ಚೀಟಿ(ಹಖಾಮ) ಹಾಗು ಇನ್ನಿತರ ಪ್ರಾಮುಖ್ಯ ದಾಖಲೆ ಪತ್ರಗಳಿದ್ದ ಪರ್ಸನ್ನು ಹೆಕ್ಕಿ ಅದರ ವಾರೀಸುದಾರರಿಗೆ ತಲುಪಿಸಿ ತನ್ನ ಪ್ರಾಮಾಣಿಕತೆಯನ್ನು ತೋರ್ಪಡಿಸಿದ ಮಂಗಳೂರು ಸಮೀಪದ ಪಾವೂರು ಹರೇಕಳದ ಆಲಡ್ಕ ನಿವಾಸಿ ಶ್ರೀಯುತ ಹೈದರ್ ಎಂಬವರು ಎಲ್ಲರ ಪ್ರಶಂಶೆ ಗೆ ಪಾತ್ರರಾಗಿದ್ದಾರೆ.
ಹಲವಾರು ವರ್ಷಗಳಿಂದ ರಿಯಾದ್ ನಲ್ಲಿ ವ್ಯಾಪಾರಸ್ಥ ರಾಗಿರುವ ಶ್ರೀಯುತ ಹೈದರ್ ರವರು ರಿಯಾದ್ ನ ಹೊಳೆಯಾ ತೈಬಾ ದಲ್ಲಿ ತನ್ನ ಎಂದಿನ ವ್ಯಾಪಾರವನ್ನು ಮುಗಿಸಿ ಹಿಂತಿರುಗುತಿದ್ದ ವೇಳೆ ಮಾರ್ಗದ ಬದಿಯಲ್ಲಿ ಒಂದು ಪರ್ಸ್ ಬಿದ್ದಿರುವುದನ್ನು ಕಂಡು ಕೂಡಲೇ ಅದನ್ನು ತೆಗೆದು ನೋಡಿದಾಗ ಅದರಲ್ಲಿ 4000 ರಿಯಾಲ್ ಹಖಾಮ ಹಾಗು ಇನ್ನಿತರ ದಾಖಲೆ ಪತ್ರಗಳಿದ್ದವು ಕೂಡಲೇ ಪರಿಚಯಸ್ಥರಿಂದ ವ್ಯಕ್ತಿಯ ಮಾಹಿತಿ ಪಡೆದು ಮಂಜೇಶ್ವರ ನಿವಾಸಿ ಅಕ್ತರ್ ಹುಸೈನ್ ಎಂಬವರಿಗೆ ಪರ್ಸನ್ನು ತಲುಪಿಸುವಲ್ಲಿ ಯಶಶ್ವೀಯಾಗಿ ತನ್ನ ಪ್ರಾಮಾಣಿಕತೆಯನ್ನು ತೋರಿಸಿದ್ದಾರೆ.