Saturday 29 October 2011

ಪೆರ್ಲ ನಲಂದಾ ಕಾಲೇಜು ಎನ್.ಎಸ್,ಎಸ್ನಿಂದ 'ಆರೋಗ್ಯಕರ' ಬೀದಿನಾಟಕ

'ತಿಳಿವಳಿಕೆಯ ಕೊರತೆಯಿಂದ ಶುಚಿತ್ವ ಪಾಲನೆ ಆಗುತ್ತಿಲ್ಲ'
ಪೆರ್ಲ: ಸಾರ್ವಜನಿಕರ ತಿಳಿವಳಿಕೆಯ ಕೊರತೆಯಿಂದ ಶುಚಿತ್ವ ಪಾಲನೆ ಆಗುತ್ತಿಲ್ಲ ಎಂದುಎಣ್ಮಕಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆಯಿಷಾ ಎ.ಎ. ಹೇಳಿದರು.ಪೆರ್ಲ ನಲಂದಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ಎಣ್ಮಕಜೆ ಗ್ರಾಮ ಪಂಚಾಯಿತಿಯ 5, 9,10 ನೇ ವಾಡರ್್ ಮಟ್ಟದ ಶುಚಿತ್ವ ಸಮಿತಿ, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ,ನೋಸರ್ ಇಂಡಿಯ ಎಲ್ ಐ ಸಿ ಮೈಕ್ರೋ ಇನ್ಶೂರೆನ್ಸ್  ಪ್ರೋಗ್ರಾಂ ಇದರ ಜಂಟಿ ಸಹಯೋಗದಲ್ಲಿಶುಚಿತ್ವ ಸಂದೇಶ ಸಾರ್ವಜನಿಕ ಸಭೆ ಮತ್ತು ಆರೋಗ್ಯ ತಿಳಿವಳಿಕಾ ಸಾಂಸ್ಕೃತಿಕಕಾರ್ಯಕ್ರಮವನ್ನು ಶನಿವಾರ ಪೆರ್ಲ ಪೇಟೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯದ ಮಹತ್ವವನ್ನು ಜನರಿಗೆ ವಿವರಿಸಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಸೇವಾ ಯೋಜನಾಘಟಕದ ಬೀದಿ ನಾಟಕ ಪರಿಣಾಮಕಾರಿಯಾಗಿದೆ ಎಂದರು.ಪೆರ್ಲ ನಲಂದಾ ಕಾಲೇಜಿನಿಂದ ರಾಷ್ಟ್ರೀಯ ಸೇವಾ ಯೋಜನೆಯ ನೇತೃತ್ವದಲ್ಲಿ ಆಯೋಜಿಸಿದ ಶುಚಿತ್ವ ಸಂದೇಶ ಯಾತ್ರೆಯನ್ನು ನೋಸರ್ ಇಂಡಿಯ ಎಲ್ ಐ ಸಿ ಮೈಕ್ರೋ ಇನ್ಶೂರೆನ್ಸ್ಪ್ರೋಗ್ರಾಂ ಅಧ್ಯಕ್ಷ ಎಂ.ವಿ.ಮಾಥ್ಯೂ ಉದ್ಘಾಟಿಸಿದರು.ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ಪೆರ್ಲ ಪೇಟೆಯಲ್ಲಿ
ದುಷ್ಕಮರ್ಿಗಳಿಂದ ನಿರಂತರ ನಡೆಸುತ್ತಿರುವ ಆನಾರೋಗ್ಯಕರ ಚಟುವಟಿಕೆಗಳನ್ನು ವಿವರಿಸಿದರು. ಇದನ್ನು ತಡೆಯಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು. ಸದಸ್ಯೆ ರಮ್ಲಾ ಅಧ್ಯಕ್ಷತೆ ವಹಿಸಿದ್ದರು. ಪೆರ್ಲ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್, ಶೀಜಾ, ನೋಸರ್ ಇಂಡಿಯ ಎಲ್ ಐ ಸಿ ಮೈಕ್ರೋ ಇನ್ಶೂರೆನ್ಸ್  ಪ್ರೋಗ್ರಾಂ ಅಧ್ಯಕ್ಷ ಎಂ.ವಿ.ಮಾಥ್ಯೂ, ನಲಂದಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಸುರೇಶ್
ಎಡನಾಡು, ನಾಟಕ ನಿದರ್ೇಶಕ ಪ್ರಕಾಶ್ ಚಂದೇರಾ, ವಾಡರ್ು ಮಟ್ಟದ ಶುಚಿತ್ವ ಸಮಿತಿಯ ಸಂಚಾಲಕ ಲತೇಶ್ ಕುಮಾರ್ ಟಿ.ವಿ ಸ್ವಾಗತಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಫಿಸಿಯೋಥೆರಪಿ ತಜ್ಞ ಸುಂದರ್ ಸ್ವಾಗತ್ ವಂದಿಸಿದರು.
ಬಳಿಕ ನಾಟಕ ನಿದರ್ೇಶಕ ಪ್ರಕಾಶ್ ಚಂದೇರಾ ರಚಿಸಿ ನಿದರ್ೇಶಿಸಿದ 'ನೇರರಿಯಾನ್'(ಸರಿ ತಿಳಿಯಲು) ಎಂಬ ಆರೋಗ್ಯ ವಿಷಯಾಧರಿತ ನಲಂದಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದಕಾರ್ಯಕರ್ತರು ನಟಿಸಿದ 2 ಬೀದಿ ನಾಟಕಗಳು ಪೆರ್ಲ ಪೇಟೆಯಲ್ಲಿ ನಡೆಯಿತು. ಬೀದಿ ನಾಟಕಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

No comments:

Post a Comment